19/06/2026
ದಿನಾಂಕ : 19.6.2026
ಚಿಕ್ಕಮಗಳೂರು ತಾಲೂಕಿನಿಂದ 20 km ದೂರದಲ್ಲಿರುವ ಯಲಗುಡಿಗೆ ಗ್ರಾಮದಲ್ಲಿರುವ ಪುಟ್ಟ ಶಾಲೆ ನಮ್ಮದು.
*ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಗುಡಿಗೆ.* ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ನಮ್ಮ ಶಾಲೆಯಲ್ಲಿರುವ ಅಕ್ಷರಧಾಮ ಕಿಂಡರ್ ಗಾರ್ಡನ್ ಸ್ಕೂಲ್ ( Pkg / Lkg/ Ukg ) ನಲ್ಲಿ 14 ಮಕ್ಕಳು ಮತ್ತು 1 ರಿಂದ 5 ನೆಯ ತರಗತಿವರೆಗೆ 20 ಮಕ್ಕಳು ಇದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಬೀಸಿದ ಬಾರಿ ಗಾಳಿ ಮಳೆಗೆ ನಮ್ಮ *ಶಾಲೆಯ ಹೆಂಚಿನ ಮೇಲೆ ಸಿಲ್ವರ್ ಮರ ಬಿದ್ದ ಪರಿಣಾಮ...* ಹೆಂಚು ಹೊಡೆದು ಹೋಯಿತು. ತರಗತಿ ಕೊಠಡಿ ಒಳಗಿನ ತಾರಾಲಯ ಕಲ್ಪನೆಯ PVC ಸೀಲಿಂಗ್ ಹಾಳಾಯಿತು. 2000 - 01 ಸಾಲಿನ ವಿದ್ಯಾರ್ಥಿಗಳು ಶಾಲೆಗೆ ಕೊಡುಗೆಯಾಗಿ ಕೊಟ್ಟ ಸ್ವಾಮಿ ವಿವೇಕಾನಂದರ ಫೋಟೋ ಹೊಡೆದು ಹೋಯಿತು ಮತ್ತು ಟೇಬಲ್ ಗ್ಲಾಸ್ ಸಹ ಹೊಡೆದು ಹೋಗಿತ್ತು.
*2006 - 27ನೇ ಸಾಲಿಗೆ ಮಕ್ಕಳು ಶಾಲೆಗೆ ಬರುವ ಮೊದಲು ಶಾಲೆಯ ರಿಪೇರಿ ಕೆಲಸ ಮಾಡುವುದು ಪ್ರಥಮ ಆದ್ಯತೆ ಆಗಿತ್ತು.* ಈ ವಿಚಾರವನ್ನು ಇಲಾಖೆಯ ಗಮನಕ್ಕೆ ಮತ್ತು ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದರು. ಆದರೆ ಏನು ಪ್ರಯೋಜನ ಆಗಿರಲಿಲ್ಲ.
*ಶ್ರೀಯುತ ರಂಗರಾಜನ್ ಸರ್ ಅವರನ್ನು ಕರೆ ಮಾಡಿ ವಿಷಯ ಹಂಚಿಕೊಂಡಾಗ, ಸರ್ ರವರು ವಾಸ್ತವ ಸ್ಥಿತಿಯನ್ನೇ ಅರಿತು ಸಹಾಯ ಹಸ್ತ ಚಾಚಿದರು.*
ಇಂದು ನಮ್ಮ ಶಾಲಾ ಕೊಠಡಿಯ *ಸೀಲಿಂಗ್ ರಿಪೇರಿ ಕೆಲಸ* ಆಗಿದೆ. *ಸ್ವಾಮಿ ವಿವೇಕಾನಂದರ ಫೋಟೋ ರಿಪೇರಿ* ಆಗಿದೆ, *3 ಟೇಬಲ್ ಟೇಬಲ್ ಗ್ಲಾ* ಸ್ ದೊರೆತಿದೆ, ನಮ್ಮ ಶಾಲೆಯ ಅಕ್ಷರಧಾಮ ಕಿಂಡರ್ ಗಾರ್ಡನ್ ಶಾಲೆಯ ತರಗತಿಗೆ *2 ರ್ಯಾಕ್* ಜೊತೆಗೆ ಮಕ್ಕಳ ಪುಸ್ತಕಗಳನ್ನು, ಕಲಿಕಾ ಸಾಮಗ್ರಿಗಳನ್ನು ಇಡಲು *25 ಪ್ಲಾಸ್ಟಿಕ್ ಟ್ರೇ* ಗಳನ್ನು ಕೊಡುಗೆ ದೊರೆತಿದೆ.
*ನಮ್ಮ ಶಾಲೆಯ ಶೈಕ್ಷಣಿಕ ಮತ್ತು ಭೌತಿಕ ಪ್ರಗತಿಗೆ ಸಹಕಾರ ನೀಡಿದ ಶ್ರೀಯುತ ರಂಗರಾಜನ್ ಸರ್ ಮತ್ತು ಸೌಜನ್ಯ ಸೇವಾಶ್ರಮದ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇವೆ.*🙏🌹🙏
----------------------------------------
ಮುಖ್ಯ ಶಿಕ್ಷಕರು / ಸಹ ಶಿಕ್ಷಕರು,
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಲಗುಡಿಗೆ, ಚಿಕ್ಕಮಗಳೂರು ತಾಲ್ಲೂಕು.